ಮಹಾಭಾರತ ಹೀಗೊಂದು ಬರಹ…!
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತವೂ ಪ್ರಮುಖ ಮಹಾಕಾವ್ಯಗಳಾಗಿದ್ದು ಮಾನವನ ಸಂಘರ್ಷದ ಏಳುಬೀಳಿನ ಕಥೆಯನ್ನು ವಿವರಿಸುತ್ತದೆ .
ಮಹಾಭಾರತ ಇದು ವ್ಯಾಸಮುನಿಯಿಂದ ರಚನೆಯಾಗಿದ್ದು ಇದರ ಲಿಪಿಕಾರ ಶ್ರೀ ಗಣೇಶ ಮಹಾಭಾರತ ರಚನೆಯಾದ ಸ್ಥಳ ಭಾರತದ ಉತ್ತರದ ಅತ್ಯಂತ ಕೊನೆಯ ಹಳ್ಳಿಯಾದ ಮನ ಎಂಬ ಹಳ್ಳಿಯಲ್ಲಿ ವ್ಯಾಸ ಗುಹೆ ಗಣೇಶ ಗುಹೆ ಇದೆ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ರಚಿಸಬೇಕೆಂದು ನಿರ್ಧರಿಸಿ ಅದನ್ನು ವೇಗವಾಗಿ ಬರೆಯಲು ಗಣಪತಿಯನ್ನು ಪ್ರಾರ್ಥಿಸಿದಾಗ ಗಣಪತಿಯು ಬರವಣಿಗೆಗೆ ನಿಧಾನವಾದರೆ ಬಿಟ್ಟು ಹೋಗುವೆನೆಂದು ಹೇಳಿದಾಗ ವ್ಯಾಸರು ಶ್ಲೋಕವನ್ನು ಹೇಳುತ್ತೇನೆ ಅದನ್ನು ಅರ್ಥೈಸಿಕೊಂಡು ಬರೆಯಬೇಕೆಂದು ಪ್ರಾರ್ಥಿಸುತ್ತಾರೆ ಬರೆಯುವ ಸಂದರ್ಭದಲ್ಲಿ ಸರಸ್ವತಿ ನದಿಯ ರಬಸದ ಸದ್ದಿಗೆ ಗಣಪತಿಗೆ ಬರೆಯಲು ತೊಂದರೆಯಾಗಿ ಚುಪ್ ಎಂದು ಹೇಳಿದಾಗ ಸರಸ್ವತಿ ನದಿಯು ಸದ್ದಿಲ್ಲದೆ ಗುಪ್ತಗಾಮಿಯಾಗಿ ಇಂದಿಗೂ ಹರಿಯುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಮಹಾಭಾರತ ಕಥೆಯು ಒಳಿತು ಕೆಡಕುಗಳ ನಡುವಿನ ಸಂಘರ್ಷವಾಗಿದೆ “ ಹಲವು ಪಾತ್ರಗಳು ಹಲವು ಮೌಲ್ಯಗಳಿಗೆ ಸಾಕ್ಷಿಯಾಗಿದೆ”. ಮಹಾಭಾರತವೂ ೧೮ ಪರ್ವಗಳನ್ನು ಹೊಂದಿದ್ದು ಮಹತ್ತರವಾದ ಅರ್ಥಪೂರ್ಣ ಕಥೆಯನ್ನು ಹೊಂದಿದೆ .
ಪಾಂಡವರು ಮತ್ತು ಕೌರವರ ನಡುವಿನ ಸಂಘರ್ಷ ಹಾಗೂ ಎಷ್ಟೇ ಕಷ್ಟ ಬಂದರೂ ಸತ್ಯಕ್ಕೆ ಒಳ್ಳೆಯದಕ್ಕೆ ಜಯ ಎಂಬ ಅಂಶವನ್ನು ತಿಳಿಸುತ್ತದೆ.
ಮಹಾಭಾರತದ ಅಂತಿಮ ಘಟ್ಟವೇ ಕುರುಕ್ಷೇತ್ರ ಯುದ್ಧ ಈ ಯುದ್ಧ ಸತ್ಯ ಅಸತ್ಯ ಗಳ ನಡುವಿನ ಹೋರಾಟ ಅರ್ಜುನನು ತನ್ನ ಬಂಧು ಬಳಗದವರ ಜೊತೆಯೇ ರಕ್ತ ಸಂಬಂಧದವರ ಜೊತೆಯೇ ಹೋರಾಡುವ ಸಂದರ್ಭದಲ್ಲಿ ಕೃಷ್ಣನ ಬೋಧನೆಯ ಸಾರವೇ ನಮ್ಮ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆ ಆಗಿದೆ .
ಇಂದಿಗೂ ಭಗವದ್ಗೀತೆಯು ಅನೇಕ ಜನರ ಕಷ್ಟ ಕಾರ್ಪಣ್ಯಗಳಿಗೆ ಉತ್ತರವಾಗಿದೆ
ಇಂದಿನ ಜನರಿಗೆ ದಾರಿದೀಪವಾಗಿದೆ ಮಹಾಭಾರತದ ಕೆಲವು ಪಾತ್ರಗಳು ಎಷ್ಟು ಮಹತ್ವ ಅರ್ಥಪೂರ್ಣ ಅದರಿಂದ ನಾವು ಕಲಿಯಬಹುದಾದ ಅಂಶಗಳ ಬಗ್ಗೆ ತಿಳಿಯೋಣ
ಮೊದಲಿಗೆ ಪಿತಾಮಹ ಭೀಷ್ಮ ಹೆಸರೇ ಹೇಳುವಂತೆ ದೇವ ವ್ರತನಾದ ಶಂತುವಿನ ಮಗನು ತಂದೆಯ ಪ್ರೇಮವನ್ನು ಗೆಲ್ಲಿಸಲು ಭೀಕರ ಪ್ರತಿಜ್ಞೆಯನ್ನು ಕೈಗೊಂಡು ಭೀಷ್ಮನಾದ ಕಥೆ ಎಲ್ಲರಿಗೂ ತಿಳಿದಿದೆ ಇಲ್ಲಿ ಎಷ್ಟೆಲ್ಲಾ ಸಂಕಟಗಳು ಬಂದರೂ ಧೈರ್ಯದಿಂದ ಎದುರಿಸಿ.
ಭೀಷ್ಮರ ಜೀವನದಿಂದ ನಾವು ಸ್ಥಿತಪ್ರಜ್ಞತೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು ಎಂತಹದೇ ಕಷ್ಟವಾದರೂ ಅಂಜದೆ ಎದೆಗುಂದದೆ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಯುತ್ತೇವೆ.
ಗುರು ದ್ರೋಣಾಚಾರ್ಯರ ಜೀವನದಿಂದ ಇಂದಿನ ಯುವ ಪೀಳಿಗೆ ಶಿಷ್ಯನ ವ್ಯಾಮೋಹಕ್ಕೆ ಒಳಗಾಗದೆ ಎಲ್ಲರನ್ನೂ ಏಕ ಸಮಾನವಾಗಿ ಕಾಣಬೇಕೆಂದು ತಿಳಿಸುತ್ತದೆ .
ಇನ್ನು ಗುರುವನ್ನು ಮಿಂಚಿ ಮೀರಿಸಿದ ಶಿಷ್ಯನಾದ ಏಕಲವ್ಯನು ಎಂತಹ ವಿದ್ಯೆಯಾದರು ಪರಿಶ್ರಮ ಮತ್ತು ಏಕಾಗ್ರತೆಯಿಂದ ಸಾಧನೆ ಮಾಡಬಹುದು ಎಂಬುದರ ಪ್ರತೀಕವಾಗಿದ್ದಾರೆ .
ಶ್ರೀ
ಕೃಷ್ಣ ಉತ್ತಮ ಮಾರ್ಗದರ್ಶಕ ಇಂದಿನ ಜನತೆಗೆ ತಂದೆ ತಾಯಿಯರು ಹಾಗೆ ಮಾರ್ಗದರ್ಶನ ಮಾಡಬೇಕು ಎಂಬುದನ್ನು ತಿಳಿಸುತ್ತದೆ.
ಕೌರವರ ತಾಯಿಯಾದ ಗಾಂಧಾರಿ ಈ ಪಾತ್ರದಿಂದ ನಾವು ಪುತ್ರ ವ್ಯಾಮೋಹ ಒಳ್ಳೆಯದಲ್ಲ ಎಂಬುದನ್ನು ತಿಳಿಯಬಹುದು ಮನು ಸ್ಮೃತಿಯಲ್ಲಿ ಯತ್ರ ನಾರಿಯಂತು ಪೂಜ್ಯಂತೆ ರಮಂತೆ ತತ್ರದೇವತಹ ಎಂದು ಹೇಳಿದ್ದಾರೆ ಅಂದರೆ ಎಲ್ಲಿ ಸ್ತ್ರೀಯರಿಗೆ ಗೌರವ ಸಿಗುತ್ತದೆ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ .
ಮಹಾಭಾರತದಲ್ಲಿನ ಪ್ರಮುಖ ಸ್ತ್ರೀಯ ಪಾತ್ರ ದ್ರೌಪದಿ ದ್ರೌಪದಿಯನ್ನು ಕೆಣಕಿ ದುಶ್ಯಾಸನ ದುರ್ಯೋಧನ ಕೆಟ್ಟ “ ಇಂದು ಈ ಜಗತ್ತಿನಲ್ಲಿ ಸ್ತ್ರೀಯರಿಗೆ ಗೌರವ ನೀಡಬೇಕು ಅಗೌರವ ಕೊಟ್ಟರೆ ಅವರ ಬದುಕು ನಾಶ ಎಂಬುದು ತಿಳಿಯುತ್ತದೆ”
“ ಇಂದಿನ ಯುವಕರಿಗೆ ಮಹಾಭಾರತದ ಕಥೆಯು ಅಲ್ಲಿನ ಕಣವು ಬದುಕಿನ ಮೌಲ್ಯದ ಪಾಠವನ್ನು ನೀಡುತ್ತದೆ .
ಇಂದಿನ ಯುವಕರು ಅದನ್ನು ಅರ್ಥೈಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ನಿರ್ವಹಿಸಿದರೆ ಅವರ ಬದುಕಿನಲ್ಲಿ ಯಶಸ್ಸು ಅಂತಿಮದವರೆಗೂ ಸಿಗುತ್ತದೆ ಇಲ್ಲವಾದರೆ ಕೌರವರ ಹಾಗೆ ನಾಶ ಹೊಂದಿ ಅಂತ್ಯವಾಗುತ್ತಾರೆ .
“
ಇದಕ್ಕೆ
ನಮ್ಮ
ಮಹಾಭಾರತ
ಸಂಜೀವಿನಿಯ ಹಾಗೆ ಕಾರ್ಯನಿರ್ವಹಣೆ ಮಾಡುತ್ತದೆ ಇದರ ಅರಿವು ಪ್ರತಿಯೊಬ್ಬ ಮಾನವನಿಗೂ ಅವಶ್ಯಕತೆ”.
ಕವನ
ಇದಕ್ಕೆ ನಡೆಯಿತು ಘೋರವಾದ ಸಂಘರ್ಷಣೆ....
ಪುತ್ರರ
ವ್ಯಾಮೋಹದಲ್ಲಿ ಇದ್ದ ದೃತ್ತ ರಾಷ್ಟ್ರ
ಎಲ್ಲದಕ್ಕೂ ಸೂತ್ರದಾರ ಶ್ರೀ ಕೃಷ್ಣ...!
ದೇವತೆಗಳ
ಅನುಗ್ರಹದಿಂದ ಜನಿಸಿದರು ಪಾಂಡುಪುತ್ರರು
ಕೊನೆಗೆ
ಹಸ್ತಿನ ಪುರದಲ್ಲಿ ಧರ್ಮ ಪ್ರತಿಷ್ಠಾಪನೆ ಮಾಡಿದರು...
ಕೌರವರು ಪಾಂಡವರ ವಿರುದ್ಧ...!
ಅರ್ಜುನ
ಸಿಲುಕಿಕೊಂಡ ಸಂಬಂಧಗಳ ಸುಳಿಯಲ್ಲಿ
ಕೃಷ್ಣ ತೋರಿಸಿದ ದಶಾವತಾರ ರಣರಂಗದಲ್ಲಿ...!
ಭೀಷ್ಮರು ದ್ರೋಣರು ಅನೇಕ ಮಹಿಮರು
ಧರ್ಮದ ರಕ್ಷಣೆಗೆ ಪ್ರಾಣವನ್ನು ತ್ಯಜಿಸಿದರು...!
ವೀರ ರೋಷದಿಂದ ಹೋರಾಡಿದ ಚಕ್ರವ್ಯೂಹದಲ್ಲಿ
ಕೊನೆಗೆ
ಅಭಿಮನ್ಯು ಅಮರನಾದ ಎಲ್ಲರ ಮನದಲ್ಲಿ...!
ಕೊನೆಗೆ
ಅವನ ಸಾವಿಗೆ ಕಾರಣವಾಯಿತೆ ಅವನ ಜ್ಞಾನದ ಅಪೂರ್ಣ..!
ಕೊನೆಗೆ ಎಲ್ಲವನ್ನು ಕಳೆದುಕೊಂಡು ಮಣ್ಣಾದನು...
ಎಲ್ಲದಕ್ಕೂ
ಮೂಲ ಕಾರಣವೇ ಶಕುನಿಯ ಚದುರಂಗ
ಇದರಿಂದ
ಆಯಿತು ಕುರುಕ್ಷೇತ್ರ ರಣರಂಗ..!
ಹಿಂದು ಧರ್ಮಗಳ ಪವಿತ್ರವಾದ ಗ್ರಂಥ
ಜಗತ್ತಿಗೆ
ಧರ್ಮದ ದೀಪ ಈ ಭಗವದ್ಗೀತಾ..!
-ವಿಜಯಲಕ್ಷ್ಮಿ ಚಿನಿವಾರ್ ಟಿ.ಎನ್
ಟೆಕ್
ಫಯರ್..🔥
ಎಂ
ಸಿ ಎ ವಿಭಾಗದಿಂದ
ಶೇಷಾದ್ರಿಪುರಂ
ಕಾಲೇಜು ತುಮಕೂರು





Comments
Post a Comment