ಮಹಾಭಾರತ ಹೀಗೊಂದು ಬರಹ…!
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತವೂ ಪ್ರಮುಖ ಮಹಾಕಾವ್ಯಗಳಾಗಿದ್ದು ಮಾನವನ ಸಂಘರ್ಷದ ಏಳುಬೀಳಿನ ಕಥೆಯನ್ನು ವಿವರಿಸುತ್ತದೆ . ಮಹಾಭಾರತ ಇದು ವ್ಯಾಸಮುನಿಯಿಂದ ರಚನೆಯಾಗಿದ್ದು ಇದರ ಲಿಪಿಕಾರ ಶ್ರೀ ಗಣೇಶ ಮಹಾಭಾರತ ರಚನೆಯಾದ ಸ್ಥಳ ಭಾರತದ ಉತ್ತರದ ಅತ್ಯಂತ ಕೊನೆಯ ಹಳ್ಳಿಯಾದ ಮನ ಎಂಬ ಹಳ್ಳಿಯಲ್ಲಿ ವ್ಯಾಸ ಗುಹೆ ಗಣೇಶ ಗುಹೆ ಇದೆ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ರಚಿಸಬೇಕೆಂದು ನಿರ್ಧರಿಸಿ ಅದನ್ನು ವೇಗವಾಗಿ ಬರೆಯಲು ಗಣಪತಿಯನ್ನು ಪ್ರಾರ್ಥಿಸಿದಾಗ ಗಣಪತಿಯು ಬರವಣಿಗೆಗೆ ನಿಧಾನವಾದರೆ ಬಿಟ್ಟು ಹೋಗುವೆನೆಂದು ಹೇಳಿದಾಗ ವ್ಯಾಸರು ಶ್ಲೋಕವನ್ನು ಹೇಳುತ್ತೇನೆ ಅದನ್ನು ಅರ್ಥೈಸಿಕೊಂಡು ಬರೆಯಬೇಕೆಂದು ಪ್ರಾರ್ಥಿಸುತ್ತಾರೆ ಬರೆಯುವ ಸಂದರ್ಭದಲ್ಲಿ ಸರಸ್ವತಿ ನದಿಯ ರಬಸದ ಸದ್ದಿಗೆ ಗಣಪತಿಗೆ ಬರೆಯಲು ತೊಂದರೆಯಾಗಿ ಚುಪ್ ಎಂದು ಹೇಳಿದಾಗ ಸರಸ್ವತಿ ನದಿಯು ಸದ್ದಿಲ್ಲದೆ ಗುಪ್ತಗಾಮಿಯಾಗಿ ಇಂದಿಗೂ ಹರಿಯುತ್ತಿರುವುದನ್ನು ನಾವು ಕಾಣಬಹುದಾಗಿದೆ . ಮಹಾಭಾರತ ಕಥೆಯು ಒಳಿತು ಕೆಡಕುಗಳ ನಡುವಿನ ಸಂಘರ್ಷವಾಗಿದೆ “ ಹಲವು ಪಾತ್ರಗಳು ಹಲವು ಮೌಲ್ಯಗಳಿಗೆ ಸಾಕ್ಷಿಯಾಗಿದೆ ”. ಮಹಾಭಾರತವೂ ೧೮ ಪರ್ವಗಳನ್ನು ಹೊಂದಿದ್ದು ಮಹತ್ತರವಾದ ಅರ್ಥಪೂರ್ಣ ಕಥೆಯನ್ನು ಹೊಂದಿದೆ . ಪಾಂಡವರು ಮತ್ತು ಕೌರವ...